ನವದೆಹಲಿ : ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟಗಳು ಬಂದಾಗ ಮಾತ್ರ ದೇವರನ್ನು ನೆನೆಯುವವರೇ ಜಾಸ್ತಿ. ಕೋವಿಡ್ ಸಂಕಷ್ಟ ದೇಶಕ್ಕೆ ಯುದ್ಧ ಕಾಲಕ್ಕಿಂತಲೂ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದವು.ಇಂಥಹ ಕಷ್ಟದ ಕಾಲದಲ್ಲಿ ಜನರು ದೇವರೆ ಮೊರೆ ಹೋದಂತೆ ತೋರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೊರೋನಾ ಅವಧಿಯಲ್ಲಿ, ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ, ದೇಶದಲ್ಲಿ ಅಗರಬತ್ತಿಗಳ ಮಾರಾಟ ಹೆಚ್ಚಾಗಿದೆ.ಕೊರೋನಾ