ಪೋರ್ನ್ ವಿಡಿಯೋದಲ್ಲಿ ಕಂಡ ಮಹಿಳೆ ನೀನೇ ಎಂದು ಹಿಂಸಿಸುತ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?!

ಬೆಂಗಳೂರು, ಗುರುವಾರ, 6 ಡಿಸೆಂಬರ್ 2018 (09:41 IST)

ಬೆಂಗಳೂರು: ಪೋರ್ನ್ ಸೈಟ್ ನೋಡುವ ಚಟಕ್ಕೆ ಬಿದ್ದ ಪತಿಯೊಬ್ಬ ಇದೀಗ ಪತ್ನಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದಾನೆ. ಇದು ನಡೆದಿರುವುದು ರಾಜಧಾನಿ ಬೆಂಗಳೂರಿನಲ್ಲಿಯೇ.
 
37 ವರ್ಷದ ಆರೋಪಿ ಪತಿ ತಾನು ನೋಡಿದ ಪೋರ್ನ್ ವಿಡಿಯೋದಲ್ಲಿ ಇದ್ದ ಮಹಿಳೆ ನೀನೇ ಎಂದು ಪತ್ನಿಗೆ ನಿರಂತರ ಹಿಂಸೆ ನೀಡುತ್ತಿದ್ದ. ಕೊನೆಗೆ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಘಟನೆಯಿಂದ ಬೇಸತ್ತ ಪತ್ನಿ ಇದೀಗ ವೈವಾಹಿಕ ಜೀವನ ಮುರಿದುಕೊಳ್ಳುವ ನಿರ್ಧಾರ ಮಾಡಿದ್ದಾಳೆ.
 
ಕಳೆದ ಕೆಲವು ದಿನಗಳ ಹಿಂದೆ ಆರೋಪಿ ಪತಿ ಪೋರ್ನ್ ವಿಡಿಯೋ ಒಂದನ್ನು ವೀಕ್ಷಿಸುತ್ತಿದ್ದ. ಅದರಲ್ಲಿದ್ದ ಮಹಿಳೆ ತನ್ನ ಪತ್ನಿಯನ್ನೇ ಹೋಲುತ್ತಿದ್ದಳು ಎಂಬ ಮಾತ್ರಕ್ಕೆ ಆತ ಆ ವಿಡಿಯೋದಲ್ಲಿ ಇದ್ದವಳು ನೀನೇ ಎಂದು ಪತ್ನಿಯ ಮೇಲೆ ದೂರಿದ್ದ. ಅಷ್ಟೇ ಅಲ್ಲದೆ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಆಕೆಗೆ ಈ ವಿಚಾರವಾಗಿ ತಗಾದೆ ತೆಗೆದು ದೈಹಿಕ ಹಿಂಸೆ ನೀಡುತ್ತಿದ್ದ.
 
ಕೊನೆಗೆ ಪ್ರಕರಣ ಎಚ್ಎಎಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಲ್ಲಿಯೂ ವಿಡಿಯೋದಲ್ಲಿದ್ದ ಮಹಿಳೆ ತನ್ನ ಪತ್ನಿಯೇ ಎಂದು ವಾದಿಸಿದ್ದ. ಕೊನೆಗೆ ಪೊಲೀಸರು ಸೈಬರ್ ಕ್ರೈಮ್ ವಿಭಾಗದ ಸಹಾಯದಿಂದ ವಿಡಿಯೋದ ಸತ್ಯಾಸತ್ಯತೆ ಪರೀಕ್ಷಿಸಿದಾಗ ಈ ವಿಡಿಯೋ ಆರೋಪಿಯ ಪತ್ನಿಯದ್ದಲ್ಲ, ಇದನ್ನು ವಿದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿತ್ತು. ಪತಿಯ ಈ ಹುಚ್ಚಾಟದಿಂದ ಬೇಸತ್ತ ಪತ್ನಿ ಇದೀಗ ವೈವಾಹಿಕ ಜೀವನ ತೊರೆದು ತವರು ಮನೆಗೆ ನಡೆದಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹುಡುಗರ ಬಳಿ ಹುಡುಗಿಯರು ಮಾತನಾಡುವಂತಿಲ್ಲ! ಕಾಲೇಜೊಂದರ ವಿವಾದಾತ್ಮಕ ನಿರ್ಧಾರ

ನವದೆಹಲಿ: ಈ ಕಾಲೇಜಿನಲ್ಲಿ ಇನ್ನು ಮುಂದೆ ಹುಡುಗಿಯರು ಹುಡುಗರ ಜತೆ ಮಾತನಾಡುವಂತಿಲ್ಲ! ಹೀಗೊಂದು ...

news

ಅಗಸ್ಟಾ ವೆಸ್ಟ್ ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಬಾಯಿಂದ ಹೊರ ಬೀಳಲಿದೆ ಭಯಾನಕ ಸತ್ಯಗಳು ಎಂದ ಪ್ರಧಾನಿ ಮೋದಿ

ನವದೆಹಲಿ: ದುಬೈನಿಂದ ಗಡೀಪಾರಾದ ಭಾರತ ವಾಂಟೆಡ್ ಲಿಸ್ಟ್ ನಲ್ಲಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ...

news

ಸರ್ಕಾರದ ಸಂಕಟ ನಿವಾರಣೆಗೆ ಶೃಂಗೇರಿ ದೇವಿಯ ಮೊರೆ ಹೋದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಬೆಳಗಾವಿ ಅಧಿವೇಶನ ಇತ್ಯಾದಿ ಸಂಕಟಗಳ ನಡುವೆ ಸಿಎಂ ಕುಮಾರಸ್ವಾಮಿ ಇಂದು ...

news

ಟಾಟಾ ಇನ್‍ ಸ್ಟಿಟ್ಯೂಟ್‍ ನಲ್ಲಿ ಸಿಲಿಂಡರ್ ಸ್ಪೋಟ; ಓರ್ವ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

ಬೆಂಗಳೂರು : ಬೆಂಗಳೂರಿನ ಯಶವಂತಪುರದ ಟಾಟಾ ಇನ್‍ ಸ್ಟಿಟ್ಯೂಟ್‍ ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ...