ತೆಲಂಗಾಣ: ಬೆಳೆದ ಬೆಳೆ ಕಣ್ಣೆದುರೇ ನಾಶವಾದ ಬೇಸರದಲ್ಲಿ ವಿಷ ಕುಡಿದ ಪತ್ನಿಯನ್ನು ಬದುಕಿಸಲು ತೆಲಂಗಾಣದ ಬುಡಕಟ್ಟು ಪ್ರದೇಶದ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಓಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತೆಲಂಗಾಣದ ರಾಥೋಡ್ ರಾಮ್ ಎಂಬಾತ ತನ್ನ ಪತ್ನಿ ಪುಷ್ಪಲತಾಳನ್ನು ಬದುಕಿಸಲು ಹೆಗಲ ಮೇಲೆ ಹೊತ್ತು ಸುಮಾರು ಮೂರು ಕಿ.ಮೀ. ಓಡಿದ್ದ. ಆದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.ಪಕ್ಕದಲ್ಲಿ ಎಲ್ಲೂ ಆಸ್ಪತ್ರೆಯಿಲ್ಲದ ಕಾರಣ ಕಾಡು