ಮಧ್ಯಪ್ರದೇಶ: ಕ್ಷುಲ್ಲುಕ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿದ ಪಾಪಿ ಪತಿ ಬಳಿಕ ಆಕೆಯ ಕೈ ಬೆರಳನ್ನು ಕಟ್ ಮಾಡಿ ವಿಕೃತಿ ಮೆರೆದ ಘಟನೆ ನಡೆದಿದೆ. ಈ ಸಂಬಂಧ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಇಬ್ಬರ ನಡುವೆ ಕ್ಷುಲ್ಲುಕ ವಿಚಾರಕ್ಕಾಗಿ ಕಲವಾಹಿತ್ತು. ಇದೇ ಸಿಟ್ಟಿನಲ್ಲಿ ರಾತ್ರಿ ಪತ್ನಿ ನಿದ್ರೆಯಲ್ಲಿದ್ದಾಗ ಪತಿ ಮಚ್ಚಿನಿಂದ ಆಕೆಯ ಕೈ ಬೆರಳುಗಳನ್ನು ಕತ್ತರಿಸಿದ್ದಾನೆ.ಇದರಿಂದಾಗಿ ಆಕೆಯ ಒಂದು ಕೈನ ಹೆಬ್ಬೆರಳು ಮತ್ತು ಇನ್ನೊಂದು ಕೈಯ ಮೂರು ಬೆರಳುಗಳು ತುಂಡಾಗಿವೆ.