ಇಂದೋರ್|
pavithra|
Last Updated:
ಮಂಗಳವಾರ, 6 ಏಪ್ರಿಲ್ 2021 (11:45 IST)
ಇಂದೋರ್ : ಮಧ್ಯಪ್ರದೇಶದಲ್ಲಿ ಪತಿ ತನ್ನ ಗುರುತನ್ನು ಮರೆಮಾಚಿ ಮದುವೆಯಾದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಲವ್ ಜಿಹಾದ್ ದೂರು ದಾಖಲಿಸಿದ್ದಾಳೆ.
ಜಿಮ್ ತರಬೇತುದಾರನಾದ ಆರೋಪಿ ಸಂತ್ರಸ್ತೆಗೆ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಪರಿಚಯನಾಗಿದ್ದಾನೆ. ಆದರೆ ತನ್ನ ಹೆಸರು ಗಬ್ಬರ್ ಎಂದು ಸುಳ್ಳು ಹೇಳಿ ಆಕೆಯೊಂದಿಗೆ ವಿವಾಹವಾಗಿದ್ದಾನೆ. ಆದರೆ ಗರ್ಭಿಣಿಯಾದ ಆಕೆ ಇತ್ತೀಚೆಗೆ ತಪಾಸಣೆಗೆ ಆಸ್ಪತ್ರೆಗೆ ಹೋದಾಗ ಆತನ ಗುರುತಿನ ಚೀಟಿಯಲ್ಲಿ ಆತನ ಹೆಸರು ಮುಸ್ತಫಾ ಎಂಬುದನ್ನು ತಿಳಿದುಕೊಂಡಳು.
ಇದರಿಂದ ಆತ ತನಗೆ ಮೋಸ ಮಾಡಿರುವುದನ್ನು ಅರಿತುಕೊಂಡ ಅವಳು ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.