ಹೈದರಾಬಾದ್ : ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಅತ್ತೆಯನ್ನು ಇರಿದು ಕೊಂದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ 7 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಹಿಳೆ ಯಾವಾಗಲೂ ತನ್ನ ತವರು ಮನೆಗೆ ಹೋಗುತ್ತಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಬಂದಿದ್ದು, ಕೋಪಗೊಂಡ ಆತ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಮಧ್ಯ ಬಂದ ಆಕೆಯ ತಾಯಿಯನ್ನು ಕೂಡ ಇರಿದಿದ್ದಾನೆ. ಇದರ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ.