ಮಧ್ಯಪ್ರದೇಶ: ಸಹೋದರಿ ಜೊತೆ ಸೇರಿಕೊಂಡು ಗಂಡ ಎನಿಸಿಕೊಂಡ ಮಹಾಶಯ ಪತ್ನಿಗೆ ಆಸಿಡ್ ಕುಡಿಸಿದ ಪರಿಣಾಮ ಆಕೆ ಗಂಭೀರವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆ ದೆಹಲಿ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.ಗ್ವಾಲಿಯರ್ ನ ಮಹಿಳೆ ಮೇಲೆ ಗಂಡ ಮತ್ತು ಆತನ ಸಹೋದರಿ ಜುಲೈ 28 ರಂದು ಇಂತಹ ಪೈಶಾಚಿಕ ಕೃತ್ಯ ನಡೆಸಿದ್ದರು.