ಪತ್ನಿಯ ಲವ್ವರ್ ಕೊಲೆ ಮಾಡಿದ ಪತಿ-ಮಾವ ಅರೆಸ್ಟ್

ಲಕ್ನೋ| Krishnaveni K| Last Modified ಸೋಮವಾರ, 22 ನವೆಂಬರ್ 2021 (12:39 IST)
ಲಕ್ನೋ: ಪತ್ನಿಯ ಜೊತೆಗೆ ಲವ್ವಿ ಡವ್ವಿ ಆಡುತ್ತಿದ್ದ ಪ್ರಿಯಕರನನ್ನು ಪತಿ ಹಾಗೂ ಆತನ ತಂದೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕೆಲವು ದಿನಗಳಿಂದ ಪತ್ನಿ ಯಾರೊಂದಿಗೆ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಿದ್ದಲ್ಲದೆ, ಹೊರಗಡೆ ಓಡಾಡುತ್ತಿರುವುದು ಹೆಚ್ಚಾಗಿತ್ತು. ಈ ಸಂಬಂಧ ಆಕೆಯ ಬೆನ್ನುಹತ್ತಿದ್ದ ಪತಿಗೆ ಆಕೆಯ ಪ್ರೇಮ ಪ್ರವರ ಗೊತ್ತಾಗಿತ್ತು.


ಇದೇ ವಿಚಾರವಾಗಿ ಸಂಬಂಧಿಕರೆಲ್ಲಾ ಅಣಕಿಸಿದಾಗ ರೊಚ್ಚಿಗೆದ್ದ ಪತಿ ತನ್ನ ತಂದೆಯ ಸಹಾಯದೊಂದಿಗೆ ಪ್ರೇಮಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆಯೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಸತ್ಯಾಂಶ ತಿಳಿದುಬಂದಿದ್ದು, ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :