ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ಪತ್ನಿಗೆ ಇದೆಂಥಾ ಗತಿ ತಂದ ಪತಿ!

ಪಾಟ್ನಾ| Krishnaveni K| Last Modified ಮಂಗಳವಾರ, 27 ಏಪ್ರಿಲ್ 2021 (10:20 IST)
ಪಾಟ್ನಾ: ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ಪತಿ ಮಹಾಶಯನೊಬ್ಬ ಪತ್ನಿಯ ತಲೆಯನ್ನೇ ಕತ್ತರಿಸಿ ತಾನೂ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.  
> ರೈಲ್ವೇ ಇಲಾಖೆಯಲ್ಲಿ ನೌಕರನಾಗಿದ್ದ ವ್ಯಕ್ತಿ ಇಂತಹ ಹೀನಾಯ ಕೃತ್ಯ ನಡೆಸಿದ್ದಾನೆ. ಪತ್ನಿಗೆ ಕೊರೋನಾ ಪಾಸಿಟಿವ್ ವರದಿ ನೋಡಿ ಆರೋಪಿ ಪತಿ ಗಾಬರಿಯಾಗಿದ್ದಾನೆ.>   ಇದೇ ಸ್ಥಿತಿಯಲ್ಲಿ ಆಕೆಯ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ತಾನು ನೆಲೆಸುತ್ತಿದ್ದ ಅಪಾರ್ಟ್ ಮೆಂಟ್ ಟೆರೇಸ್ ನಿಂದ ಜಿಗಿದು ಸ್ವಯಂ ಹತ್ಯೆ ಮಾಡಿದ್ದಾನೆ.ಇದರಲ್ಲಿ ಇನ್ನಷ್ಟು ಓದಿ :