ಲಕ್ನೋ: ವರದಕ್ಷಿಣೆ ತರುವಂತೆ ಕಿರಕುಳ ನೀಡುತ್ತಿದ್ದ ಗಂಡ ಮದ್ಯ ಸೇವಿಸಿ ಪತ್ನಿಯ ಮೇಲೆ ಸರ್ಜಿಕಲ್ ಬ್ಲೇಡ್ ನಿಂದ ದಾಳಿ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ.ಗಂಭೀರ ಗಾಯಗೊಂಡಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತನ್ನ ಗಂಡ ಮಾಡಿ ಹಲ್ಲೆ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಅದಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.ಮಹಿಳೆ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪಾನಮತ್ತನಾಗಿ ಅಲ್ಲಿಗೆ ಬಂದಿದ್ದ ಗಂಡ ಪತ್ನಿಯ ಮೇಲೆ ದಾಳಿ ಮಾಡಿದ್ದ.