Widgets Magazine

ಪತ್ನಿಯ ವಿರುದ್ಧ ಸಂಚು ನಡೆಸಿದ ಪತಿಮಹಾಶಯ

ನೋಯ್ಡಾ| Krishnaveni K| Last Updated: ಶುಕ್ರವಾರ, 23 ನವೆಂಬರ್ 2018 (19:08 IST)
ನೋಯ್ಡಾ: ಪತ್ನಿಯ ಮೊಬೈಲ್ ನಂಬರ್ ನ್ನು ಅಶ್ಲೀಲ ಸೈಟ್ ನಲ್ಲಿ ಪ್ರಕಟಿಸಿದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಪತಿ ಖಾಸಗಿ ಕಂಪನಿಯೊಂದರಲ್ಲಿ ನೌಕರ. 2011 ರಲ್ಲಿ ಈತ ಪ್ರೀತಿಸಿ ಮದುವೆಯಾಗಿದ್ದ. ಆದರೆ ಮನಸ್ತಾಪದಿಂದಾಗಿ ಕಳೆದ 10 ತಿಂಗಳಿನಿಂದ ಗಂಡ-ಹೆಂಡತಿ ದೂರವಾಗಿದ್ದರು.


ಆದರೆ ಇದೀಗ ಪತ್ನಿಯ ಅಶ್ಲೀಲ ಫೋಟೋಗಳು, ಖಾಸಗಿ ಸಂದೇಶಗಳ ಜತೆಗೆ ಆಕೆಯ ಮೊಬೈಲ್ ನಂಬರ್ ನ್ನು
ವೆಬ್ ಸೈಟ್ ನಲ್ಲಿ ಪ್ರಕಟಿಸಿ ಕಿರುಕುಳ ನೀಡಿದ್ದ. ಈ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಮೊದಲು ತಲೆಮರೆಸಿಕೊಂಡಿದ್ದ ಆರೋಪಿ ಪತಿ ಈಗ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.








ಇದರಲ್ಲಿ ಇನ್ನಷ್ಟು ಓದಿ :