ಪ್ರೀತಿಸಿ ಮದುವೆಯಾದ ಪತಿಯೊಬ್ಬ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಲು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ಮಗು ಹಾಗೂ ಪತ್ನಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ತನಗೆ ಡಿವೋರ್ಸ್ ಬೇಕೇ ಬೇಕೆಂದು ಹಠ ಹಿಡಿದಿದ್ದನಂತೆ.ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಗೃಹಿಣಿಯ ತವರು ಮನೆಯವರು ಮಹಿಳೆಯನ್ನು ಕರೆದುಕೊಂಡು ಬರಲು ಗಂಡನ ಮನೆಗೆ ತೆರಳಿದಾಗ ಗಂಡನ ಕೃತ್ಯ ಬಯಲಿಗೆ ಬಂದಿದೆ.ಪತಿ ವಿನಾಯಕ್ ಸಿಂಗ್ ಎಂಬಾತ ತನ್ನ ಪತ್ನಿ ಸೋನಿಯಾ ದತ್ತಾ ಎಂಬುವರನ್ನು ಎರಡ್ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು.