ಹೈದರಾಬಾದ್ : ಇತ್ತೀಚೆಗಷ್ಟೇ “2019ರ ಲೋಕಸಭೆ ಚುನಾವಣೆ ಬರುವ ಮುನ್ನ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ಎರಡು ವರ್ಷದ ಹಿಂದೆಯೇ ನನಗೆ ಹೇಳಿತ್ತು” ಎಂದು ಹೇಳಿಕೆ ನೀಡಿದ್ದ ಜನ ಸೇನಾ ಮುಖ್ಯಸ್ಥ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಇದೀಗ “ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನನಗೆ ಇಷ್ಟವಾಗಲ್ಲ” ಎಂದು ಹೇಳುವುದರ ಮೂಲಕ ಸುದ್ದಿಯಾಗಿದ್ದಾರೆ.