'ನಾನೆಂದೂ ಮೌನಿ ಪ್ರಧಾನಿಯಾಗಿರಲಿಲ್ಲ’- ಹಾಲಿ ಪ್ರಧಾನಿಗೆ ಮಾಜಿ ಪ್ರಧಾನಿ ಟಾಂಗ್

ನವದೆಹಲಿ, ಬುಧವಾರ, 19 ಡಿಸೆಂಬರ್ 2018 (14:42 IST)

ನವದೆಹಲಿ : ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌, ಅವರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತಿನ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.


ತಮ್ಮ ಚೇಂಜಿಂಗ್‌ ಇಂಡಿಯಾ ಕೃತಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, 'ನಾನು ಮೌನಿ ಪ್ರಧಾನಿ ಎಂದು ಜನರಾಡಿಕೊಳ್ಳುತ್ತಿದ್ದರು. ಆದರೆ ನಾನೆಂದೂ ಮಾಧ್ಯಮದೊಂದಿಗೆ ಮಾತನಾಡಲು ಹೆದರುವ ಪ್ರಧಾನಿ ಆಗಿರಲಿಲ್ಲ; ಹಾಗೆಯೇ ನಾನು ಆಕಸ್ಮಿಕ ಪ್ರಧಾನಿಯೂ ಆಗಿರಲಿಲ್ಲ ಮತ್ತು ಆಕಸ್ಮಿಕ ಹಣಕಾಸು ಸಚಿವನೂ ಆಗಿರಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್‌ ನೀಡಿದ್ದಾರೆ.


‘ನಾನೀಗ ಬರೆದಿರುವ ಕೃತಿ ಚೇಂಜಿಂಗ್‌ ಇಂಡಿಯಾ ಎಲ್ಲವನ್ನೂ ಹೇಳುತ್ತದೆ. ನಾನು ಮಾಧ್ಯಮದೊಂದಿಗೆ ಮಾತನಾಡಲು ಹೆದರುವ ಪ್ರಧಾನಿ ಆಗಿರಲಿಲ್ಲ. ನಾನು ಕಾಲಕಾಲಕ್ಕೆ ಸುದ್ದಿ ಗೋಷ್ಠಿ ನಡೆಸುತ್ತಿದ್ದೇವೆ. ಪ್ರತೀ ಬಾರಿ ವಿದೇಶ ಪ್ರವಾಸ ಮುಗಿಸಿ ಬಂದಾಗ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದೆ' ಎಂದು ಡಾ. ಸಿಂಗ್‌ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಡುರಸ್ತೆಯಲ್ಲಿ ಹತ್ತನೇ ತರಗತಿಯ ಬಾಲಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಆಗ್ರಾ : ನಡುರಸ್ತೆಯಲ್ಲಿ ಹತ್ತನೇ ತರಗತಿಯ ಬಾಲಕಿಯ ಮೇಲೆ ದುಷ್ಕರ್ಮಿಗಳಿಬ್ಬರು ಪೆಟ್ರೋಲ್‌ ಸುರಿದು ಬೆಂಕಿ ...

news

ಲಾರಿ ಕ್ಲೀನರ್ ನ ಜೀವ ತೆಗೆದ ಚರಂಡಿ

ಚರಂಡಿಗೆ ಹಾಕಲಾದ ಸ್ಲಾಬ್ ತುಂಡಾಗಿ ಲಾರಿ ಮುಗುಚಿದ ಪರಿಣಾಮ ಲಾರಿ ಕ್ಲೀನರ್ ಸಾವನ್ನಪ್ಪಿದ ಘಟನೆ ನಡೆದಿದೆ.

news

ಬೆಸ್ಕಾಂ, ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕ ಬಲಿ!

ಬೆಸ್ಕಾಂ ಅಧಿಕಾರಿಗಳು ಹಾಗೂ ವೈದ್ಯರ ನಿರ್ಲಕ್ಷ್ಯಕ್ಕೆ ಅಮಾಯಕನೊಬ್ಬ ಜೀವ ಕಳೆದುಕೊಂಡ ಘಟನೆ ನಡೆದಿದೆ.

news

ಮಾರಮ್ಮ ದೇವಸ್ಥಾನದ ಪ್ರಸಾದಕ್ಕೆ ವಿಷ ಹಾಕಿದ ನಾಲ್ವರು ಪಾಪಿಗಳು ಅರೆಸ್ಟ್

ಚಾಮರಾಜನಗರ : ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ವಿಷ ...