ಲಕ್ನೋ: ಕರ್ತವ್ಯವೇ ದೇವರು ಎಂದು ನಂಬಿರುವ ಎಷ್ಟೋ ಪ್ರಾಮಾಣಿಕ ಅಧಿಕಾರಿಗಳೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಇದು ಉದಾಹರಣೆ. ಉತ್ತರಪ್ರದೇಶದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಹೆರಿಗೆ ರಜೆ ತ್ಯಜಿಸಿ ಮಗು ಜತೆಗೆ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸುದ್ದಿಯಾಗಿದ್ದಾರೆ.