ರಾಯ್ ಪುರ : ವಿದ್ಯುತ್ ಕಡಿತ ಉಂಟಾದ ವೇಳೆಯಲ್ಲಿ ಮೂವರು ಯುವಕರು ಸೇರಿ ಮನೆಗೆ ನುಗ್ಗಿ18 ವರ್ಷದ ಹುಡುಗಿಯನ್ನು ಅಪಹರಿಸಿ ಮಾನಭಂಗ ಎಸಗಿದ ಘಟನೆ ಚತ್ತೀಸ್ ಗಢದ ರಾಯ್ ಪುರದಲ್ಲಿ ನಡೆದಿದೆ. ಸಂತ್ರಸ್ತೆ ರಾತ್ರಿ ಮನೆಯವರ ಜೊತೆ ಟಿವಿ ನೋಡುತ್ತಿದ್ದಾಗ ಅಚಾನಕ್ ಆಗಿ ಕರೆಂಟ್ ಹೋಗಿದೆ. ಆ ವೇಳೆ ಯಾರಿಗೂ ತಿಳಿಯದಂತೆ ಮನೆಗೆ ನುಗ್ಗಿದ ಮೂವರು ಯುವಕರು ಹುಡುಗಿಯನ್ನು ಅಪಹರಿಸಿ ನಿದ್ರೆ ಮಾತ್ರೆ ನೀಡಿ ಸಾಮೂಹಿಕವಾಗಿ ಮಾನಭಂಗ ಎಸಗಿದ್ದಾರೆ.