ಸಾಲ ಮಾಡುವಲ್ಲಿ ದಾಖಲೆ ಮಾಡಿದ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ

ಇಸ್ಲಾಮಾಬಾದ್, ಬುಧವಾರ, 9 ಅಕ್ಟೋಬರ್ 2019 (08:31 IST)

ಇಸ್ಲಾಮಾಬಾದ್: ಜಾಗತಿಕವಾಗಿ ಮೂಲೆಗುಂಪಾಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಇಮ್ರಾನ್ ಖಾನ್ ಸರ್ಕಾರ ಸಾಲ ಮಾಡುವುದರಲ್ಲೂ ದಾಖಲೆ ಮಾಡಿದೆ.


 
ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗುವತ್ತ ಸಾಗಿದ್ದು ಪಾಕಿಸ್ತಾನ ಕರೆನ್ಸಿ 7,509 ಬಿಲಿಯನ್ ರೂಗಳಷ್ಟು ಸಾಲ ಮಾಡಿಕೊಂಡಿದೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಸಾಲದಲ್ಲೇ ದಾಖಲೆ ಮಾಡಿದೆ.
 
2018 ರಿಂದ 2019 ರ  ಅವಧಿಯಲ್ಲಿ ವಿದೇಶೀ ಮೂಲಗಳಿಂದ ಸುಮಾರು 2,804 ಬಿಲಿಯನ್ ರೂ. ಮತ್ತು ದೇಶೀಯ ಬ್ಯಾಂಕ್ ಗಳು ಮತ್ತಿತರ ಮೂಲಗಳಿಂದ ಸುಮಾರು 4,705 ಬಿಲಿಯನ್ ರೂ. ಸಾಲ ಪಡೆದಿದೆ ಎಂದು ಸ್ಥಳೀಯ ಮಾಧ‍್ಯಮವೊಂದು ವರದಿ ಮಾಡಿದೆ. ತೆರಿಗೆ ಸಂಗ್ರಹದಲ್ಲೂ ವ್ಯಾಪಕ ಕುಸಿತವಾಗಿದ್ದು, ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮಾಧ‍್ಯಮ ವರದಿ ಹೇಳಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದಸರಾದಲ್ಲಿ ಶನಿವೃಕ್ಷಕ್ಕೆ ವಿಶೇಷ ಪೂಜೆ ಮಾಡೋದ್ಯಾಕೆ?

ವಿಜಯದಶಮಿ ಅಂಗವಾಗಿ ಶಮಿವೃಕ್ಷಕ್ಕೆ ನಡೆಸಲಾದ ವಿಶೇಷ ಪೂಜೆ ಸಮಾರಂಭಕ್ಕೆ ಭಕ್ತಸಾಗರ ಅಪಾರವಾಗಿ ಹರಿದು ...

ಶಾಸಕರ ಸಂಬಂಧಿಯಿಂದ ದೌರ್ಜನ್ಯ - ಮುಖ್ಯಾಧಿಕಾರಿಗೆ ಕೊಲೆ ಬೆದರಿಕೆ

ಮಾಜಿ ಶಾಸಕರ ಸಂಬಂಧಿಯೊಬ್ಬರು ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರೋ ಘಟನೆ ನಡೆದಿದೆ.

news

ಸಡಗರದ ಶೋಭಾಯಾತ್ರೆ – ಅದ್ಧೂರಿ ತೆರೆ ಕಂಡ ಮಂಗಳೂರು ದಸರಾ

ಮಂಗಳೂರು ದಸರಾ ಹಬ್ಬಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ.

news

ರೌಡಿಗಳಿಗೆ ಶಾಕ್ : ಮಹಾನವಮಿ ಹಬ್ಬದ ದಿನವೇ ಪೊಲೀಸ್ ದಾಳಿ

ಮಹಾನವಮಿ‌ ಹಬ್ಬದಂದೇ ಪೊಲೀಸರು ರೌಡಿಶೀಟರ್ ಗಳಿಗೆ ಬಿಗ್ ಶಾಕ್ ನೀಡಿದ್ದಾರೆ.