ಜೆಎನ್ಯು ಮತ್ತೆ ಸುದ್ದಿಯಲ್ಲಿದೆ. ವಿಶ್ವ ವಿದ್ಯಾಲಯದ ಎಮ್ಎಸ್ಸಿ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಉಪ ಕುಲಪತಿ ಎಮ್.ಜೆ ಕುಮಾರ್, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೂಡಿ ಹಾಕಿ ವಿದ್ಯಾರ್ಥಿ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಅಹೋ ರಾತ್ರಿ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. ಸತತ 24 ಗಂಟೆಗಳ ಕಾಲ ಆಡಳಿತ ಕಚೇರಿಯಲ್ಲಿ ನಮ್ಮನ್ನು ಅನ್ನ- ನೀರಿಲ್ಲದೇ ಕೂಡಿ ಹಾಕಿ ಅಮಾನವೀಯ ನಡೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ