ಭಾರತದಲ್ಲಿ ಅತಿಹೆಚ್ಚು ಜನ ಸಾವಿಗೀಡಾಗುತ್ತಿರುವ ಕಾಯಿಲೆಗಳ ಪೈಕಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಹಲವು ರೀತಿಯ ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಆರ್ಥಿಕವಾಗಿ ಕುಗ್ಗಿಸುವಂತೆ ಮಾಡುತ್ತಿದೆ. ಕೆಲವು ಕಡೆ ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ಲಭಿಸದೇ ಇರುವುದು ಸಹ ಸಾವಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ನೀಡುತ್ತಾ, ಜನರ ಮೆಚ್ಚುಗೆಗೆ ಪಾತ್ರರಾಗಿ ಬಂದಿರುವ ಟಾಟಾ ಟ್ರಸ್ಟ್, ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಡೀಮ್ಡ್ ಯೂನಿವರ್ಸಿಟಿ ಪಟ್ಟಿಗೆ ಸೇರಿರುವ ಯೆನೆಪೋಯಾ ಶೈಕ್ಷಣಿಕ ಸಂಸ್ಥೆಯು