ಉತ್ತರಕಾಶಿ: ಭಾರತದ ಉತ್ತರಕಾಶಿ ಹಾಗೂ ಚೀನಾದ ಗಡಿಯ ಸಂಪರ್ಕ ಸೇತುವೆ ಕುಸಿದು ಬಿದ್ದಿದ್ದು, ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು, ಶಾಲಾ ಮಕ್ಕಳು, ಶಿಕ್ಷಕರು ಈಗ ಪರದಾಡುತ್ತಿದ್ದಾರೆ. ನಿಯಮದ ಪ್ರಕಾರ ಈ ಸೇತುವೆಯ ಮೇಲೆ ಎರಡು ವಾಹನಗಳು ಒಟ್ಟಿಗೆ ಚಲಿಸುವಂತ್ತಿಲ್ಲ, ಆದರೂ ಎರಡು ಲಾರಿಗಳು ಒಮ್ಮೆಲೇ ಚಲಿಸಿದ್ದರಿಂದ ಗಂಗೋತ್ರಿ ಬ್ರಿಡ್ಜ್ ಕುಸಿದು ಬಿದ್ದಿದೆ. ಇದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸೇತುವೆ ಕುಸಿತದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ