ಭಾರತದಲ್ಲಿಂದು 34,973 ಕೊರೊನಾ ಕೇಸ್ ಪತ್ತೆ, 260 ಮಂದಿ ಸಾವು

ನವದೆಹಲಿ| Ramya kosira| Last Modified ಶುಕ್ರವಾರ, 10 ಸೆಪ್ಟಂಬರ್ 2021 (10:23 IST)
ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 34,973 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ 34,973 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,31,74,954 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 260 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,42,009 ಕ್ಕೆ ಏರಿಕೆಯಾಗಿದೆ.> ಕಳೆದ 24 ಗಂಟೆಗಳಲ್ಲಿ 37,681 ಕೊರೊನಾ ಸೋಂಕಿತರು ಚೇತರಿಕೆಯಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,23,42,299 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 3,90, 646 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದೆ.> ಸಕ್ರಿಯ ಪ್ರಕರಣಗಳು: 3,90,646 ಒಟ್ಟು ಪ್ರಕರಣಗಳು: 3,31,74,954
ಒಟ್ಟು ಚೇತರಿಕೆಗಳು: 3,23,42,299
ಸಾವಿನ ಸಂಖ್ಯೆ: 4,42,009
ಒಟ್ಟು ಲಸಿಕೆ: 72,37,84,586
 ಇದರಲ್ಲಿ ಇನ್ನಷ್ಟು ಓದಿ :