ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರವಾಸದ ಮೊದಲನೇ ದಿನವಾದ ಸೋಮವಾರ ಜರ್ಮನಿಯ ರಾಜಧಾನಿ ಬರ್ಲಿನ್ಗೆ ಆಗಮಿಸಿದರು.ಈ ವೇಳೆ ಅವರಿಗೆ ಭಾರತೀಯ ಸಮುದಾಯ ಮತ್ತು ಜರ್ಮನ್ ಸರ್ಕಾರದ ಪರವಾಗಿ ಅದ್ಧೂರಿ ಸ್ವಾಗತ ನೀಡಲಾಯಿತು. ಅಲ್ಲದೇ ಬರ್ಲಿನ್ನ ಫೆಡೆರಲ್ ಚಾನ್ಸಲರಿಯೆದುರು ‘ಗಾರ್ಡ್ ಆಫ್ ಆನರ್’ ನೀಡಿ ಬರ ಮಾಡಿಕೊಳ್ಳಲಾಯಿತು.ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸೋಮವಾರ ಜರ್ಮನ್ ರಾಜಧಾನಿ ಬರ್ಲಿನ್ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ