ಕೊರಾನಾವನ್ನು ಹೋಗಲಾಡಿಸೋ ತಾಕತ್ತು ಭಾರತಕ್ಕಿದೆ-ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ

ನವದೆಹಲಿ| pavithra| Last Modified ಮಂಗಳವಾರ, 24 ಮಾರ್ಚ್ 2020 (14:06 IST)
ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗ ಭಾರತಕ್ಕೂ ಕಾಲಿಟ್ಟು ತನ್ನ ಅಟ್ಟಹಾಸ ಮರೆಯುತ್ತಿದೆ. ಈ ನಡುವೆ ಕೊರೊನಾ ವಿರುದ್ಧ ಭಾರತದ ಹೋರಾಟ ಕುರಿತು ವಿಶ್ವಸಂಸ್ಥೆಯೊಂದು ಹೇಳಿಕೆಯನ್ನು ನೀಡಿದೆ.

 

ಭಾರತಕ್ಕೆ ಕೊರಾನಾವನ್ನು ಹೋಗಲಾಡಿಸೋ ತಾಕತ್ತು ಇದೆ. ಈ ಹಿಂದೆ 2 ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿತ್ತು.ಪೋಲಿಯೋ ಮತ್ತು ಸಿಡುಬನ್ನ ಭಾರತ ನಿರ್ಮೂಲನಗೊಳಿಸಿತ್ತು. ಪೋಲಿಯೋ, ಸಿಡುಬು ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಹೀಗಾಗಿ ಕೊರೊನಾವನ್ನ ಹೋಗಲಾಡಿಸೋ ಶಕ್ತಿ ಭಾರತಕ್ಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೈಕಲ್ ರ್ಯಾನ್ ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :