ನವದೆಹಲಿ: 69ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಮ್ಮ ದೇಶದ ನಾಗರಿಕರೇ ಪ್ರಜಾಪ್ರಭುತ್ವದ ಮುಖ್ಯ ಆಧಾರ ಸ್ತಂಭ ಎಂದು ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ವೀರರನ್ನು ಹಾಗೂ ಸೇನಾ ಯೋಧರನ್ನು ನೆನೆಯುವ ದಿನವೂ ಇದಾಗಿದೆ. ಎಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಬಡವರು, ಹೆಣ್ಣು ಮಕ್ಕಳು ಮತ್ತು ಇನ್ನೂ ಮೂಲಸೌಲಭ್ಯಗಳಿಂದ ವಂಚಿತರಾದರವನ್ನು ಶೀಘ್ರವಾಗಿ ಉದ್ಧಾರ ಮಾಡಬೇಕು ಎಂದು ಕೋವಿಂದ್ ಹೇಳಿದ್ದಾರೆ.