ನವದೆಹಲಿ : ಚೀನಾವನ್ನು ಹಿಂದಿಕ್ಕಿರುವ ಅಮೆರಿಕ, 2021-22ನೇ ಸಾಲಿನಲ್ಲಿ ಭಾರತದ ನಂ.1 ವ್ಯಾಪಾರ ಪಾಲುದಾರ ದೇಶವಾಗಿ ಹೊಮ್ಮಿದೆ. ಇದು ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಸಂಬಂಧದ ಪ್ರತೀಕ ಎಂದು ಬಣ್ಣಿಸಲಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಅನ್ವಯ, 2020-21ರಲ್ಲಿ ಉಭಯ ದೇಶಗಳ ನಡುವೆ 6.61 ಲಕ್ಷ ಕೋಟಿ ರು.ವ್ಯಾಪಾರ ನಡೆದಿದ್ದರೆ,ಅದು 2021-22ರಲ್ಲಿ 9.07 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಅಮೆರಿಕಕ್ಕೆ ಭಾರತದ ರಫ್ತು 5.78