ಇಸ್ರೋ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಜೂನ್ ನಲ್ಲಿ ಜಿಎಸ್ಎಟಿ-19, ಜಿಎಸ್ಎ ಟಿ-11 ಹಾಗೂ ಜಿಎಸ್ಎಟಿ-20 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಈ ಮೂಲಕ ಭಾರತ ಹೈಸ್ಪೀಡ್ ಇಂಟರ್ ನೆಟ್ ನಲ್ಲಿ ಮತ್ತಷ್ಟು ಮೇಲ್ಮಟ್ಟಕ್ಕೆ ಏರಲು ಸಹಕಾರಿಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.