ಹೈದರಾಬಾದ್ : ಮುಂದಿನ 30 ರಿಂದ 40 ವರ್ಷಗಳೂ ಬಿಜೆಪಿ ಯುಗವಾಗಿರಲಿದ್ದು, ಭಾರತವು `ವಿಶ್ವಗುರು’ ಆಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.ಇಂದು ಹೈದರಾಬಾದ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ರಾಜಕಾರಣ, ಜಾತೀಯತೆ ಹಾಗೂ ತುಷ್ಟೀಕರಣದ ರಾಜಕೀಯ ಮಹಾಪಾಪ. ಹಲವು ವರ್ಷಗಳಿಂದ ದೇಶ ಈ ಪಾಪವನ್ನು ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರ ಭಾಷಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ