ಜಮ್ಮುವಿನ ಉರಿ ಸೆಕ್ಟರ್ನಲ್ಲಿ ಗಡಿಯೊಳಗೆ ನುಸಳಲು ಪ್ರಯತ್ನಿಸುತ್ತಿದ್ದ ಐವರು ಉಗ್ರರನ್ನು ಸೇನಾಪಡೆ ಯೋಧರು ಹತ್ಯೆಗೈದಿದ್ದಾರೆ. ಐವರು ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಸೇನಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಭಾರತೀಯ ಸೇನಾಪಡೆ ಯೋಧರು ದಾಳಿ ನಡೆಸುತ್ತಿದ್ದಂತೆ ಕೆಲವರು ಪಾಕ್ ಗಡಿಯೊಳಗೆ ಪಲಾಯನ ಮಾಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಕಾಶ್ಮಿರದಾದ್ಯಂತವಿರುವ ಇಂಡೋ-ಪಾಕ್ ಗಡಿಯಲ್ಲಿ ನೂರಾರು ಉಗ್ರರು ದೇಶದೊಳಗೆ ನುಗ್ಗಲು ಸಜ್ಜುಗೊಂಡಿದ್ದಾರೆ ಎಂದು ಸೇನಾ