ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು ನಿಜ ಎಂದು ವಿದೇಶಾಂಗ ಸಚಿವಾಲಯದಿಂದ ಸರ್ಕಾರದ ಪರವಾಗಿ ಅಧಿಕೃತ ಹೇಳಿಕೆ ನೀಡಿದೆ.ಬಾಲಾಕೋಟ್ ನಲ್ಲಿ ಉಗ್ರರ ಕ್ಯಾಂಪ್ ಮೇಲೆ ವಾಯು ಸೇನೆ ದಾಳಿ ನಡೆಸಿದ್ದೇವೆ. ಜೈಶ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆದಿದೆ. ದಾಳಿಯಲ್ಲಿ ಉಗ್ರ ಮೌಲಾನಾ ಯೂಸಫ್ ಅಜರ್ ಸೇರಿದಂತೆ ಹಲವು ಉಗ್ರರ ಹತ್ಯೆಯಾಗಿದೆ. ಎಂದು ವಿದೇಶಾಂಗ