ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ವಿಶ್ವದ ಮೊದಲ ಪರಿಸರ ಸ್ನೇಹಿಯಾದ ಸೌರ ಶಕ್ತಿ /ಎಲೆಕ್ಟ್ರಿಕ್ ರೈಲಿಗೆ ಚಾಲನೆ ನೀಡಿದ್ದು, ಈ ರೈಲಿನ ಬೋಗಿಗಳಲ್ಲಿ ಲೈಟ್ ಮತ್ತು ಫ್ಯಾನ್ ಗೆ ಸೌರ ಶಕ್ತಿಯನ್ನು ಅಳವಡಿಸಲಾಗಿದೆ. ಈ ಯೋಜನೆಯಿಂದಾಗಿ ಪ್ರತಿ ವರ್ಷಕ್ಕೆ ಪ್ರತಿಯ ಬೋಗಿಯಿಂದಾಗುವ ಸುಮಾರು 9 ಟನ್ ಮಾಲಿನ್ಯವನ್ನು ತಡೆಗಟ್ಟಲಿದೆ ಮತ್ತು 21 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಅಲ್ಲದೆ ಇದರಿಂದ ಪ್ರತಿ ವರ್ಷ 12 ಲಕ್ಷ ರುಪಾಯಿ ಉಳಿತಾಯವಾಗಲಿದೆ.