ಕೀವ್ : ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಕಾಮೋಡ ದಟ್ಟವಾಗುತ್ತಿದ್ದು, ಉಕ್ರೇನ್ನಲ್ಲಿರುವ ಭಾರತೀಯರು ದೇಶಕ್ಕೆ ಮರಳುವಂತೆ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಈ ಮಾಹಿತಿ ರವಾನಿಸಿದ್ದು ವಿದ್ಯಾರ್ಥಿಗಳು ಆದ್ಯತೆಯಲ್ಲಿ ದೇಶ ತೊರೆಯುವಂತೆ ಹೇಳಿದೆ.ಉಕ್ರೇನ್ನಲ್ಲಿ ಅನಿಶ್ಚಿತೆ ಹೆಚ್ಚುತ್ತಿದೆ, ರಷ್ಯಾ ಯಾವುದೇ ಸಂದರ್ಭದಲ್ಲೂ ದಾಳಿ ಮಾಡುವ ಸಾಧ್ಯತೆಗಳಿದ್ದು ಯುದ್ಧದ ವಾತಾವರಣ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಅನಿವಾರ್ಯವಲ್ಲದೇ ಭಾರತೀಯರು, ವಿಶೇಷವಾಗಿ ವಿದ್ಯಾರ್ಥಿಗಳು ದೇಶಕ್ಕೆ ಮರಳಿ ಎಂದು