ಲಕ್ನೋ : ಗೃಹ ಬಳಕೆಯ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿರುವ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿ ಟ್ವೀಟ್ ಮಾಡಿದ್ದಾರೆ. ಪಂಚ ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯವಾದ ನಂತರ, ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಜನರಿಗೆ ಹಣದುಬ್ಬರದ ಮತ್ತೊಂದು ಉಡುಗೊರೆಯಾಗಿದೆ. ಲಕ್ನೋದಲ್ಲಿ ಎಲ್ಪಿಜಿ ಸಿಲಿಂಡರ್ ಸಾವಿರದ ಹತ್ತಿರ ಮತ್ತು ಪಾಟ್ನಾದಲ್ಲಿ ಸಾವಿರಕ್ಕೂ ಹೆಚ್ಚಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.137 ದಿನಗಳ ನಂತರ ಪೆಟ್ರೋಲ್, ಡೀಸೆಲ್