25 ವರ್ಷದ ಮಹಿಳಾ ಟೆಕ್ಕಿಯನ್ನು ಆಕೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಉಸಿರುಗಟ್ಟಿಸಿ ಹತ್ಯೆಗೈದ ಹೇಯ ಘಟನೆ ಪುಣೆಯಲ್ಲಿ ನಡೆದಿದೆ. ಮೃತಳನ್ನು ಕೇರಳ ಮೂಲದ ಕೆ. ರಸಿಲಾ ರಾಜು ಎಂದು ಗುರುತಿಸಲಾಗಿದ್ದು, ಹಿಂಜವಾಡಿ ಪ್ರದೇಶದ ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್ನಲ್ಲಿರುವ ಇನ್ಫೋಸಿಸ್ನಲ್ಲಿ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿರಬಹುದು ಪೊಲೀಸರು ತಿಳಿಸಿದ್ದು, ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.