ನವದೆಹಲಿ : ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತ್ರಿ ಸದಸ್ಯ ಪೀಠ ರಚಿಸಿ ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಭರವಸೆ ನೀಡಿದ್ದಾರೆ.ಪ್ರಕರಣ ವಿಚಾರಣೆ ನಡೆಸುವಂತೆ ಶುಕ್ರವಾರ ಷರಿಯತ್ ಸಮಿತಿ ಪರವಾಗಿ ವಕೀಲರು ಮನವಿ ಮಾಡಿದರು. ಪರೀಕ್ಷೆಗೆ ಐದು ದಿನಗಳಷ್ಟೆ ಬಾಕಿಯಿದೆ. ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು. ಅದಕ್ಕಾಗಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆ