ಹೈದರಾಬಾದ್: ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಹಕರಿಸಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಪತ್ನಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಐಪಿಎಸ್ ಅಧಿಕಾರಿ ಸಫೀರ್ ಕರೀಂ ಪತ್ನಿ ಜಾಯ್ಸಿ ಬಂಧಿತ ಮಹಿಳೆ. ಸದ್ಯ ಐಪಿಎಸ್ ತರಬೇತಿಯಲ್ಲಿರುವ ಕರೀಂ ಸೋಮವಾರದಂದು ಪರೀಕ್ಷೆಯಲ್ಲಿ ಕಾಪಿ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಜಾಯ್ಸಿ ತನ್ನ ಗಂಡನಿಗೆ ಸಹಾಯ ಮಾಡಲು ಹೈ-ಟೆಕ್ ವ್ಯವಸ್ಥೆ ಮಾಡಿಕೊಟ್ಟಿದ್ದ ಆರೋಪ ಹಾಗೂ ಅಶೋಕ್ನಗರದಲ್ಲಿರುವ ಲಾ ಎಕ್ಸೆಲೆನ್ಸ್ ಐಎಎಸ್ ಸ್ಟಡಿ ಸರ್ಕಲ್