ಚೆನ್ನೈ : ಮಾವಿನ ಗೊರಟೆಯನ್ನು ಶಾಲೆಯಲ್ಲಿ ಎಸೆದಿದ್ದರಿಂದ ಸಿಟ್ಟಿಗೆದ್ದ ಆತನ ಸಹಪಾಠಿಯೇ ಚಾಕುವಿನಿಂದ ಬಾಲಕನನ್ನು ಇರಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಬಳಿಯ ಶಾಲೆಯೊಳಗೆ ನಡೆದಿದೆ.ಬನ್ನಿಹಳ್ಳಿ ಗ್ರಾಮದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. ಆ ಸಂದರ್ಭದಲ್ಲ್ಲಿ ಆತ ಮಾವಿನ ಗೊರಟೆಯನ್ನು ಎಸೆದಿದ್ದಾನೆ.ಇದರಿಂದಾಗಿ ಆತನಿಗೆ ಹಾಗೂ ಬಾಲಕನ ಸಹಪಾಠಿಯ ನಡುವೆ ಜಗಳ ಪ್ರಾರಂಭವಾಗಿದೆ. ಗೊರಟೆ ಎಸದಿದ್ದ ಬಾಲಕನಿಗೆ ಸಹಪಾಠಿಗಳು ಬೆದರಿಕೆಯನ್ನು ಹಾಕಿದ್ದಾರೆ.ಆದರೂ ನಿಲ್ಲದ ಜಗಳ ವಿಕೋಪಕ್ಕೆ