ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಜತೆ ತಾವು ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮಾಡಿದ್ದಾಗಿಯೂ, ಅದಕ್ಕೆ ಪ್ರತಿಯಾಗಿ ಉಗ್ರಗಾಮಿಗಳು ತಮಗೆ ತಲೆ ಕತ್ತರಿಸಿದ ಚಿತ್ರವನ್ನು ಕಳಿಸುವ ಮೂಲಕ ಶಾಂತಿ ಮಾತುಕತೆ ಧಿಕ್ಕರಿಸಿದ್ದಾರೆ ಎಂದು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರುವಾರ ತಿಳಿಸಿದರು. ತ್ರಿಪುರಾಗೆ ಮೂರು ದಿನಗಳ ಪ್ರವಾಸ ಮಾಡಿದ್ದ ರವಿಶಂಕರ್ ಗುರುವಾರ ಕೋಲ್ಕತ್ತಾಗೆ ತೆರಳಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳಿಗೆ ಶಾಂತಿ ಮಾತುಕತೆ ಅಗತ್ಯವಿಲ್ಲವೆಂದು ಕಾಣುತ್ತದೆ. ಆದ್ದರಿಂದ ಅವರನ್ನು ಮಿಲಿಟರಿಯೇ