Photo Courtesy: Twitterಶ್ರೀಹರಿಕೋಟ: ಹೊಸ ವರ್ಷದಂದೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಹೊಸ ಸಾಧನೆಯತ್ತ ಹೆಜ್ಜೆಯಿಟ್ಟಿದೆ. ಇಂದು ಹೊಸ ಉಪಗ್ರಹವೊಂದನ್ನು ನಭಕ್ಕೆ ಹಾರಿಸಿದೆ.ಬಾಹ್ಯಾಕಾಶದಲ್ಲಿ ಕಂಡುಬರುವ ತೀವ್ರವಾದ ಕ್ಷಕಿರಣಗಳನ್ನು ಅಧ್ಯಯನ ಮಾಡುವ ಎಕ್ಸ್ ಪೊಸ್ಕಾಟ್ ಉಪಗ್ರಹವನ್ನು ಇಂದು ಉಡ್ಡಯನ ಮಾಡಿದೆ. ಚಂದ್ರಯಾನ 3, ಮಂಗಳ ಯಾನ ಯೋಜನೆಯ ಬೆನ್ನಲ್ಲೇ ಇಸ್ರೋ ಮತ್ತೊಂದು ಸಾಹಸ ಮಾಡಿದೆ.ಇಂದು ಬೆಳಿಗ್ಗೆ ಸುಮಾರು 9.10 ಕ್ಕೆ ಉಪಗ್ರಹವನ್ನು ಯಶಸ್ವಿಯಾಗಿ ಲಾಂಚ್ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.