ನವದೆಹಲಿ : ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶುಕ್ರಯಾನಕ್ಕೆ ಸಜ್ಜಾಗಿದೆ.ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ.ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ?