ಶ್ರೀಹರಿಕೋಟಾ: ರಕ್ಷಣಾ ಕಾರ್ಯತಂತ್ರ ಹಾಗೂ ಕಣ್ಗಾವಲು ಉದ್ದೇಶಕ್ಕಾಗಿ ಇಸ್ರೋ ನಿರ್ಮಿಸಿರುವ ಕಾರ್ಟೋಸ್ಯಾಟ್-2 ಉಪಗ್ರಹ ಮತ್ತು ವಿವಿಧ ದೇಶಗಳ 31 ನ್ಯಾನೋ ಉಪಗ್ರಹಗಳನ್ನು ಹೊತ್ತು ಪಿಎಎಸ್ ಎಲ್ ವಿ ಸಿ-38 ಯಶಸ್ವಿ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.29ಕ್ಕೆ ಕಾರ್ಟೋಸ್ಯಾಟ್ 2 ಎಸ್ ಸೇರಿದಂತೆ 31 ಉಪಗ್ರಹಗಳನ್ನು ಯಶಸ್ವಿಯಾಗಿ ಪಿಎಸ್ ಎಲ್ ವಿ ಸಿ 38 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.