ಮಹತ್ವಾಕಾಂಕ್ಷಿ ಗಗನಯಾನಕ್ಕೆ ಬಳಸುವ ರಾಕೆಟ್ ಅನ್ನು ಇಸ್ರೊ ಭಾನುವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ಗಗನಯಾನದ ಸಿದ್ಥತೆಗೆ ಆರಂಭದಲ್ಲೇ ಯಶಸ್ಸು ಲಭಿಸಿದೆ. ಗಗನಯಾತ್ರಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸುವ ಭಾರತದ ಚೊಚ್ಚಲ ಪ್ರಯತ್ನಕ್ಕೆ ಇಸ್ರೊ ಸಿದ್ಧತೆಗಳನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಕ್ಷಿಪಣಿ ಉಡಾವಣೆಗೆ ಬೇಕಾದ ರಾಕೆಟ್ ಪರೀಕ್ಷೆ ನಡೆಸಲಾಯಿತು. ಭಾನುವಾರ ಮುಂಜಾನೆ 7.20ರ ಸುಮಾರಿಗೆ ಶ್ರೀಹರಿ ಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಎಚ್ ಎಸ್ 200 ರಾಕೆಟ್ ಅನ್ನು ಪರೀಕ್ಷೆಗೊಳಪಡಿಸಲಾಯಿತು. ಇದರ