ಬೆಂಗಳೂರು: ಕಳೆದ ವರ್ಷ ಚಂದ್ರಯಾನ 2 ನಲ್ಲಿ ಇಸ್ರೋ ತಾನು ಅಂದುಕೊಂಡ ಯಶಸ್ಸು ಪಡೆಯಲಾಗಿರಲಿಲ್ಲ. ಆದರೆ ಅಷ್ಟಕ್ಕೇ ಎದೆಗುಂದದ ಇಸ್ರೋ ಹೊಸ ವರ್ಷದ ಮೊದಲ ದಿನವೇ ಗುಡ್ ನ್ಯೂಸ್ ಕೊಟ್ಟಿದೆ.ವರ್ಷದ ಆರಂಭದ ದಿನವಾದ ಇಂದು ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಈ ವರ್ಷದ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ 3 ಯೋಜನೆಯೂ ಸೇರಿದೆ ಎನ್ನುವುದು ವಿಶೇಷ.ಈ ವರ್ಷ ಮತ್ತೆ ಮಾನವ ರಹಿತ ಚಂದ್ರಯಾನ