ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರಿಗೆ ಸೇರಿದ ಪೊಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ರಾತ್ರೋ ರಾತ್ರಿ ದಾಳಿ ನಡೆಸಿದ್ದು, ತಮಿಳುನಾಡಿನಾದ್ಯಂತ ಜಯಯಲಿತಾ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ 10 ಗಂಟೆ ವೇಳೆಗೆ ದಿಡೀರ್ ದಾಳಿ ನಡೆಸಿದ ಐಟಿ ಅಧಿಕಾರಿಗಳು ಸತತ ಐದು ಗಂಟೆಗಳ ಕಾಲ ತಪಾಸಣೆ ನಡೆಸಿ ಇದೀಗ ಕೆಲವೇ ಕ್ಷಣಗಳ ಮೊದಲು ಸ್ಥಳದಿಂದ ತೆರಳಿದ್ದಾರೆ.ಜಯಲಲಿತಾ ನಿವಾಸದಿಂದ ಒಂದು ಲ್ಯಾಪ್ ಟಾಪ್, 4-5 ಪೆನ್