ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ಕಾರು ನಿಲುಗಡೆ ಮಾಡಿದ್ದು ತಮ್ಮ ಸಂಘಟನೆಯವರೇ ಎಂದು ಜೈಷ್ ಉಲ್ ಉಗ್ರರು ಟೆಲಿಗ್ರಾಂ ಆಪ್ ನಲ್ಲಿ ಸಂದೇಶ ರವಾನಿಸಿದ್ದು ನಿನ್ನೆ ಸುದ್ದಿಯಾಗಿತ್ತು. ಆದರೆ ಇಂದು ಆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂಬಾನಿ ನಿವಾಸದಲ್ಲಿ ಜಿಲೆಟಿನ್ ಸ್ಪೋಟಕ ತುಂಬಿದ ವಾಹನ ನಿಲುಗಡೆ ಮಾಡಿದ ಬೆದರಿಕೆ ಹಾಕಿದ್ದು ಜೈಷ್ ಸಂಘಟನೆಯಲ್ಲ ಎಂದು ಜೈಷ್ ಸಂಘಟನೆಯೇ ಹೇಳಿಕೆ ಬಿಡುಗಡೆ ಮಾಡಿದೆ.