ನವದೆಹಲಿ : ನೆರೆಯ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಎಫ್-16 ಪ್ಯಾಕೇಜ್ ಬಗ್ಗೆ ಭಾರತ ಪ್ರಶ್ನೆ ಎತ್ತಿದೆ.ಅಮೆರಿಕ ನೀಡುತ್ತಿರುವ ಪ್ಯಾಕೇಜ್ಗೆ ಪಾಕಿಸ್ತಾನ ಯೋಗ್ಯವಾಗಿದೆಯೇ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರಶ್ನಿಸಿದ್ದಾರೆ.ಭಾನುವಾರ ವಾಷಿಂಗ್ಟನ್ನಲ್ಲಿ ಭಾರತ-ಅಮೆರಿಕ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಜೈಶಂಕರ್, ಇದು ಪಾಕಿಸ್ತಾನಕ್ಕೆ ಉತ್ತಮ ಸೇವೆ ಸಲ್ಲಿಸುವುದರಿಂದ ಅಥವಾ ಅಮೆರಿಕದ ಹಿತಾಸಕ್ತಿಗಳಿಗೆ ಗೌರವ ನೀಡುವುದರಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ ಎಂದು ಟಾಂಗ್ ನೀಡಿದರು.ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಳವಾಗಿರುವುದು ಎಲ್ಲರಿಗೂ ಗೊತ್ತಿರುವ