ಸೆಪ್ಟೆಂಬರ್ 22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ಯಾರೋ ಅವರನ್ನ ನೂಕಿದ್ದರು ಎಂದು ತಮಿಳುನಾಡಿನ ಮಾಜಿ ಸ್ಪೀಕರ್ ಪಿ.ಎಚ್. ಪಾಂಡಿಯನ್ ಆರೋಪಿಸಿದ್ದಾರೆ. `ಯಾರೋ ಒಬ್ಬರು ಅಮ್ಮನನ್ನ ನೂಕಿದ್ದರಿಂದ ಅಮ್ಮ ಕೆಳಗೆ ಬಿದ್ದಿದ್ದರು. ಆ ಬಳಿಕ ಯಾರೊಬ್ಬರೂ ಏನಾಯಿತೆಂದು ಅಮ್ಮನ ಕಡೆ ನೋಡಲಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಆಂಬ್ಯುಲೆನ್ಸ್ ಕರೆದು ಆಸ್ಪತ್ರೆಗೆ ದಾಖಲಿಸಿದರು ಎಂದು ಪಾಂಡಿಯನ್ ಹೇಳಿದ್ದಾರೆ.ಅಮ್ಮ ಆಸ್ಪತ್ರೆಗೆ ದಾಖಲಾದ ಬಳಿಕ ಅಲ್ಲಿದ್ದ 27 ಸಿಸಿಟಿವಿಗಳನ್ನೂ ತೆಗೆದುಹಾಕಲಾಯಿತು.