ಜಯಲಲಿತಾ ಕೂಡ ಪ್ರಧಾನಿ ರೇಸ್‌ನಲ್ಲಿ : ಜ್ಯೋತಿಷ್ಯರ ಭವಿಷ್ಯ

ಚೆನ್ನೈ| Jaya| Last Updated: ಶುಕ್ರವಾರ, 16 ಮೇ 2014 (14:34 IST)
ಭಾರತದ ಮುಂದಿನ ಪ್ರಧಾನಿ ಸ್ಥಾನ ಮೋದಿಗೆ ಲಭಿಸಲಿದೆ ಎಂದು ಭವಿಷ್ಯ ನುಡಿದಿರುವ ತಮಿಳುನಾಡಿನ ಜ್ಯೋತಿಷ್ಯರು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕೂಡ ಈ ರೇಸ್‌ನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ.  
 
ರಾಜ್ಯದಲ್ಲಿ ಕಣಕ್ಕಿಳಿದಿರುವ 806 ಅಭ್ಯರ್ಥಿಗಳಲ್ಲಿ 39 ಜನ ಗೆಲುವಿನ ನಗೆ ಬೀರಿದರೆ, ಉಳಿದವರು ಸೋಲನ್ನು ಕಾಣುವುದು ಅನಿವಾರ್ಯ ಸತ್ಯ. 
 
ತಮಿಳುನಾಡಿನಲ್ಲಿ ಒಟ್ಟು 55 ಮಿಲಿಯನ್ ಮತದಾರರಿದ್ದು, ಅಲ್ಲಿ ಪ್ರತಿಶತ 73 ರಷ್ಟು ಮತದಾನವಾಗಿತ್ತು. 
 
808 ಜನ ಸ್ಪರ್ಧಿಗಳಲ್ಲಿ 55 ಮಹಿಳೆಯರು ಮತ್ತು ಒಬ್ಬರು ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. 
 
65,000 ಎಲೆಕ್ಟ್ರೊನಿಕ್ ವೋಟಿಂಗ್ ಮಶೀನ್‌ಗಳಲ್ಲಿ ಗುಪ್ತವಾಗಿ ದಾಖಲಾಗಿರುವ ಮತಗಳನ್ನು 42 ಕೇಂದ್ರಗಳಲ್ಲಿ ಎಣಿಕೆ ನಡೆಸಲಾಗುತ್ತಿದೆ.  
 
ಕಣಕ್ಕಿಳಿದಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಜ್ಯೋತಿಷ್ಯರಿಗೂ ಕೂಡ ಚುನಾವಣಾ ಫಲಿತಾಂಶ ಪರೀಕ್ಷೆಯಂತೆ ಭಾಸವಾಗುತ್ತಿದೆ. ಕಾರಣ ಅವರು ನುಡಿದಿರುವ ಭವಿಷ್ಯದ ಪ್ರಕಾರ ಜಯಲಲಿತಾ ನೇತೃತ್ವದ ಎಐಡಿಎಂಕೆ ತಮಿಳುನಾಡಿನ 40 ( 39 ತಮಿಳುನಾಡು, 1 ಪುದುಚೇರಿ) ಕ್ಷೇತ್ರಗಳ ಪೈಕಿ 20 ರಿಂದ 32 ಸ್ಥಾನಗಳನ್ನು ಗೆಲ್ಲಲಿದೆ.  
 
ಪ್ರಖ್ಯಾತ ಜ್ಯೋತಿಷಿ ಹರಿಕೇಶನಲ್ಲೂರ ವೆಂಕಟರಾಮನ್ ಪ್ರಕಾರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. 

LIVE Karnataka Lok Sabha 2014 Election Results
 
LIVE Lok Sabha 2014 Election Results
ಇದರಲ್ಲಿ ಇನ್ನಷ್ಟು ಓದಿ :