ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದ ಬಿಜೆಪಿ ನಾಯಕಿ

ನವದೆಹಲಿ| pavithra| Last Modified ಶನಿವಾರ, 19 ಅಕ್ಟೋಬರ್ 2019 (09:10 IST)
ನವದೆಹಲಿ : ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದು ಬಿಜೆಪಿ ನಾಯಕಿ ಜಯಪ್ರದಾ ಹೇಳಿದ್ದಾರೆ.
ಭೂಕಬಳಿಕೆಯ ವಿಚಾರವಾಗಿ ಅಝಂ ಖಾನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಈ ವಿಚಾರವಾಗಿ ಅವರು ಮೇಕೆಗಳು ಹಾಗೂ ಕೋಳಿಗಳನ್ನು ಕದ್ದ ಆಪಾದನೆಯನ್ನು ತಮ್ಮ ಮೇಲೆ ಹೊರಿಸಲಾಗಿತ್ತಿದೆ ಎಂದು ವೇದಿಕೆಯ ಮೇಲೆ ಕಣ್ಣೀರಿಟ್ಟಿದ್ದರು.


ಈ ಬಗ್ಗೆ ಮಾತನಾಡಿದ ಜಯಪ್ರದಾ ಅವರು, ಆತನಿಂದ ಕಣ್ಣೀರಿಟ್ಟ ಮಹಿಳೆಯರ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ. ಇದೇ ಎಸ್ ಪಿ ಪಕ್ಷದಲ್ಲಿದ್ದ ವೇಳೆ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಅಝಂ ಖಾನ್ ಮುಂದಾಗಿದ್ದರು ಎಂದು ಕಿಡಿಕಾರಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :