ನವದೆಹಲಿ: ರಿಲಯನ್ಸ್ ಸಂಸ್ಥೆಯ ಜಿಯೋ ಪ್ರೈಮರಿ ಮೆಂಬರ್ ಶಿಪ್ ಪಡೆದುಕೊಳ್ಳಲು ಬಯಸುವರಿಗೊಂದು ಸುವರ್ಣಾವಕಾಶ. ನಿನ್ನೆಗೆ ಕೊನೆಗೊಳ್ಳಬೇಕಾಗಿದ್ದ, ಪ್ರೈಮರಿ ಮೆಂಬರ್ ಶಿಪ್ ಅವಧಿ ಇನ್ನೂ 15 ದಿನ ವಿಸ್ತರಣೆಯಾಗಿದೆ. ಅಂದರೆ ಏಪ್ರಿಲ್ 15 ರವರೆಗೆ ಪ್ರೈಮರಿ ಮೆಂಬರ್ ಶಿಪ್ ಪಡೆದುಕೊಳ್ಳಬಯಸುವವರಿಗೆ ಅವಕಾಶ ಒದಗಿ ಬರಲಿದೆ. ಅಲ್ಲದೆ ಏಪ್ರಿಲ್ 15 ರೊಳಗೆ 303 ರೂ. ಪ್ಲ್ಯಾನ್ ಖರೀದಿಸಿದವರಿಗೆ, ಮೂರು ತಿಂಗಳ ಹೆಚ್ಚುವರಿ ಆಫರ್ ನೀಡಲಾಗಿದೆ. ಗ್ರಾಹಕರ ಬಹು ಬೇಡಿಕೆಯ ಮೇರೆಗೆ ಅವಧಿ ವಿಸ್ತರಿಸಲಾಗಿದೆ