ಚೆನ್ನೈ: ಹೊಸ ಪಕ್ಷ ಸ್ಥಾಪಿಸುವ ಹೊಸ್ತಿಲಲ್ಲಿ ಪಬ್ಲಿಸಿಟಿಗಾಗಿ ನಟ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಎಂಬ ವಿಷಯವನ್ನು ಕೆದಕಿದರು ಎಂದು ಹಿರಿಯ ಪತ್ರಕರ್ತರೊಬ್ಬರು ಟೀಕಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಕಮಲ್ ಹಾಸನ್ ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಮಲ್ ಈ ಹೇಳಿಕೆ ಪಬ್ಲಿಸಿಟಿ ಸ್ಟಂಟ್ ಎಂದು ಹಿರಿಯ ಪತ್ರಕರ್ತ ಎಸ್. ವೆಂಕಟ್ರಮಣ್ ಆರೋಪಿಸಿದ್ದಾರೆ.ಹಿಂದೂ ಭಯೋತ್ಪಾದಕರು ಎನ್ನುವ ಮೂಲಕ ಕಮಲ್ ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ.